ಶನಿವಾರ, ಡಿಸೆಂಬರ್ 20, 2025

ಹುಡುಗ ಮತ್ತು ಐಸ್‌ಕ್ರೀಮ್ (ಕಣ್ಣಿಗೆ ಕಾಣುವುದೇ ನಿಜವಲ್ಲ)

ಐಸ್ಕ್ರೀಮ್ ಸಂಡೇ ಬಹಳ ಕಡಿಮೆ ಬೆಲೆಯಿದ್ದ ದಿನಗಳಲ್ಲಿ, ಹತ್ತು ವರ್ಷದ ಹುಡುಗನು ಒಂದು ಹೋಟೆಲ್ ಕಾಫಿ ಶಾಪ್ಗೆ ಪ್ರವೇಶಿಸಿ, ಮೇಜಿನ ಬಳಿ ಕುಳಿತನು. ವೇಟ್ರೆಸ್ ಅವನ ಮುಂದೆ ನೀರಿನ ಗ್ಲಾಸ್ ಇಟ್ಟಳು.

ಐಸ್ಕ್ರೀಮ್ ಸಂಡೇ ಎಷ್ಟು?” ಎಂದು ಹುಡುಗನು ಕೇಳಿದ.

ಐವತ್ತು ರೂಪಾಯಿ,” ಎಂದು ವೇಟ್ರೆಸ್ ಉತ್ತರಿಸಿದಳು.

ಹುಡುಗನು ತನ್ನ ಜೇಬಿನಲ್ಲಿದ್ದ ನಾಣ್ಯಗಳನ್ನು  ಹೊರತೆಗೆದು ಎಣಿಸಿದನು.

ಪ್ಲೈನ್ ಐಸ್ಕ್ರೀಮ್ ಎಷ್ಟು?” ಎಂದು ಅವನು ಮರು  ವಿಚಾರಿಸಿದ. ಅಂಗಡಿಯಲ್ಲಿ ಕೆಲವರು ಈಗಾಗಲೇ ಮೇಜಿಗಾಗಿ ಕಾಯುತ್ತಿದ್ದರು, ಆದ್ದರಿಂದ ವೇಟ್ರೆಸ್ ಸ್ವಲ್ಪ ಕೋಪಗೊಂಡು ಅಸಹನೆಯಿಂದ ಉತ್ತರಿಸಿದಳು.

ಮೂವತ್ತೈದು ರೂಪಾಯಿ,” ಎಂದು ಅವಳು ಕಟುವಾಗಿ ಹೇಳಿದಳು.

ಹುಡುಗನು ಮತ್ತೆ ನಾಣ್ಯಗಳನ್ನು ಎಣಿಸಿ, “ನನಗೆ ಪ್ಲೈನ್ ಐಸ್ಕ್ರೀಮ್ ಬೇಕು,” ಎಂದನು.

ವೇಟ್ರೆಸ್ ಐಸ್ಕ್ರೀಮ್ ತಂದು, ಬಿಲ್ನ್ನು ಮೇಜಿನ ಮೇಲೆ ಇಟ್ಟು, ಅಲ್ಲಿಂದ ಹೊರಟಳು. ಹುಡುಗನು ಐಸ್ಕ್ರೀಮ್ ತಿಂದು, ಕ್ಯಾಶಿಯರ್ಗೆ ಹಣ ನೀಡಿ ಹೊರಟನು.

ವೇಟ್ರೆಸ್ ಹಿಂತಿರುಗಿ, ಮೇಜನ್ನು ಒರೆಸಲು ಪ್ರಾರಂಭಿಸಿದಾಗ, ಅಲ್ಲಿ ಇಡಲಾಗಿದ್ದ ಹದಿನೈದು ರೂಪಾಯಿ ಟಿಪ್ಸ್ ಅವಳ ಕಂಗಳಲ್ಲಿ ನೀರು ಹರಿಸಿದವು.

ಕಥೆಯ ನೀತಿ

ಮೊದಲ ನೋಟಕ್ಕೆ ತೀರ್ಪು ಕೊಡಬೇಡಿ. ಕಣ್ಣಿಗೆ ಕಾಣುವುದೇ ನಿಜವಲ್ಲ. ನಾವು ಸಹಾಯ ಮಾಡುವುದಿಲ್ಲವೆಂದು ಭಾವಿಸುವವರು, ಬಹಳ ಉದಾರವಾಗಿ ಕೊಡುವವರಾಗಿರುತ್ತಾರೆ. ಆದ್ದರಿಂದ ನಿಮ್ಮ ಹೃದಯದ ಭಾವನೆಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಿ.

ಮೂಲ: ಅನಾಮಿಕ