ತವಕದಿಂದ ಓಡೋಡಿ ಬಂದಿದ್ದ ರಮೇಶ ಬಸ್ಸ್ ನಿಲ್ದಾಣಕ್ಕೆ. ಪಯಣಿಗನಾಗಿ ತನ್ನೂರಿಗೆ ಹೊರಟಿದ್ದ ವಾರದ ಕೊನೆಯ ದಿನವಾದ ಶನಿವಾರದಂದು. ಬೇಸಿಗೆಯ ಬೆಳಗಿನ ಬಿಸಿಲಿಗೆ ಹಣೆಯ ಮೇಲೆ ಹತ್ತಾರು ನೀರ ಹನಿಯ ಸಾಲು ಮುತ್ತಿನ ಹಾರದಂತೆ ತೋರುತ್ತಿತ್ತು ಬೆಳಗಿನ ಸೂರ್ಯ ಕಿರಣಗಳಿಂದ. ಹಾಗೂ ಹೀಗೂ ಬಸ್ಸ್ ಹತ್ತಿದ್ದಾಯಿತು. ಅಷ್ಟೇನೂ ಜನ ದಟ್ಟಣೆ ಬಸ್ಸ್ ನಲ್ಲಿ ಇರಲಿಲ್ಲವಾದರೂ ನನ್ನವರು,ಪರಿಚಿತರು ಯಾರಾದರೂ ಕಾಣಿಸಬಹುದೆಂದು ಕಣ್ಣಲ್ಲೇ ಎಲ್ಲಾ ಕಡೆ ಹುಡುಕಿದ ರಮೇಶ. ಯಾರೂ ಇಲ್ಲವೆಂದು ಖಾತ್ರಿಯಾದ ನಂತರ ಕಿಟಕಿ ಬಳಿಯ ಖಾಲಿ ಸೀಟ್ ನಲ್ಲಿ ರಮೇಶ ಆಸೀನನಾದ. ಕಣ್ಣು ಗೆಳೆಯರ,ಪರಿಚಿತರ ಹುಡುಕುತ್ತಿತ್ತಾದರೂ.... ಅವನನ್ನು ಸೆಳೆದದ್ದೂ ಆ ಸುಂದರ ಕಣ್ಣುಗಳು. ಏಕೆ ಸೆಳೆದವೋ! ರಮೇಶ ಅವಕ್ಕಾದ.ಆ ಕಂಗಳು ಪರಿಚಿತವೂ ಆಗಿರಲಿಲ್ಲ. ಆದರೂ ಕಣ್ಣುಗಳು ತನ್ನನ್ನು ಸೆಳೆಯುತ್ತಿರುವಂತೆ ರಮೇಶನಿಗೆ ಭಾಸವಾಯಿತು.ಮತ್ತೆ ಮತ್ತೆ ಆ ಕಣ್ಣುಗಳು "ನನ್ನನ್ನೇ ನೋಡು ಬೇರೆಡೆಗೆ ತಿರುಗದೆ" ಎಂದು ಆದೇಶಿಸಿದಂತೆ ತೋರುತ್ತಿತ್ತು.ಆಕರ್ಷಕವಾದ ಆ ಕಣ್ಣುಗಳು ಮನದಲ್ಲಿ ಬಣ್ಣ ಬಣ್ಣದ ಕನಸುಗಳನ್ನು ಸೃಷ್ಟಿಸಿದ್ದಂತೂ ನಿಜ. ನಿಜವಾಗಲೂ ಸುಂದರ ಕಣ್ಣುಗಳು,ಮನಮೋಹಕ,ತಿದ್ದಿ ತೀಡಿದ ಚಿತ್ರದಂತೆ ತೋರುತ್ತಿತ್ತು. ಅಷ್ಟೇನೂ ಪೌಡರ್.lipstick ಹಾಕಿರದ ಕಂದು ಮುಖದಲ್ಲಿ ಕಾಮನಬಿಲ್ಲಿನಂತೆ ತೋರುವ ಕಣ್ಣುರೆಪ್ಪೆಗಳು ಮನ್ಮಥನ ಭಾಣದಂತೆ ರಮೇಶನ ಹೃದಯಕ್ಕೆ ನಾಟಿತ್ತು.ಕಪ್ಪು ಬಟ್ಟಲು ಕಣ್ಣುಗಳು ಅಮೃತವನ್ನೇ ಸೇವಿಸು ಬಾ ಎಂಬಂತೆ ಆಹ್ವಾನಿಸುತ್ತಿದ್ದವು.ರಮೇಶನ ಮನದಲ್ಲಿ ಆ ಕಂಗಳು ಬಯಕೆಯ ಕಡಲಿನ ಬಿರುಗಾಳಿಯನ್ನೇ ಎಬ್ಬಿಸುವ ಹುನ್ನಾರ ನಡೆಸಿತ್ತು.ಮತ್ತೆ ಮತ್ತೆ ದಿಟ್ಟಿಸಿ ನೋಡುತ್ತಿದ್ದ. ಸೌಂದರ್ಯಕ್ಕೆ ಮಾರುಹೋಗಿ ಕರಗುವ ಮೋಡದಂತಾದ ರಮೇಶ.ಆಕೆಯ ತುಟಿಯಂಚಿಂದ ಜಾರಲೋ ಬೇಡವೋ ಎಂದು ಪ್ರಶ್ನಿಸುವಂತಹ ಮುಗುಳ್ನಗೆ ಕಾಮದೇವನ ನಾಟ್ಯದಂತೆ ರಮೇಶನ ಭಾವನೆಗಳಿಗೆ ತಂಗಾಳಿ ಬೀಸುತ್ತಿತ್ತು. ಆ ಬೇಸಿಗೆಯ ಬಿಸಿಗಾಳಿಯಲ್ಲೂ ಹಿಮಾಲಯದ ತಂಪಾದ ವಾತಾವರಣದಲ್ಲಿ ಬಾನಾಡಿಯಾಗಿ ರಮೇಶನ ಮನಸ್ಸು ವಿಹರಿಸುತ್ತಿತ್ತು. ಆಕೆಯ ಮನದೊಳಗೆ ಇಣುಕಿನೋಡಿ ಗಮನಸೆಳೆಯುವ ಪ್ರಯತ್ನವಂತೂ ಹದಿಹರೆಯದ ವಯಸ್ಸು ಮಾಡುತ್ತಿತ್ತು. ಎರಡು-ವರೆ ಗಂಟೆಗಳ ಬಸ್ಸ್ ಪ್ರಯಾಣದ ಬವಣೆ ರಮೇಶನಿಗೆ ಆಗಲೇ ಇಲ್ಲ. ಕಂಡಕ್ಟರ್ "ಗೌರೀಬಿದನೂರ್, ಅಭಿಲಾಷ್ ಥೀಯೇಟರ್, ಇಳೀರಿ, ಇಳೀರಿ, ಬಸ್ಸ್ ಸ್ಟಾಂಡಿಗೆ ಹೋಗಲ್ಲ" ಎಂದಾಗಲೇ ಭ್ರಮಾಲೋಕದಿಂದ ರಮೇಶ ವಾಸ್ತವಕ್ಕೆ ಇಳಿದದ್ದು.ಆಕೆಯ ಕಣ್ಣುಗಳ ಸೊಬಗಿಗೆ ಧನ್ಯವಾದ ಸೂಚಿಸಿದ್ದ. ಧೂಳನ್ನೆಬ್ಬಿಸಿ ಹೋದ ಬಸ್ಸಿನ ಕಡೆಗೆ ನೋಡುತ್ತಾ ಆ ಕಂಗಳಿಗೆ ನಮನಗಳನ್ನು ಸೂಚಿಸುತ್ತಾ,ಅಣಕು ನಗೆ ಬೀರುತ್ತಾ ಮನೆಯ ಹಾದಿ ಹಿಡಿದ ರಮೇಶ.
ಸೋಮವಾರ, ಮೇ 20, 2013
ಕಂಗಳೋ ತಿದ್ದಿತೀಡಿದ ಚಿತ್ರವೋ?

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ