ಶಿಶಿರದ ತಂಪಾದ ಬೆಳಿಗ್ಗೆ, ತೋಟದಲ್ಲಿ ಮಯೂರಿ ನಿಧಾನವಾಗಿ ನಡೆಯುತ್ತಿದ್ದಳು. ಮುಂಜಾನೆಯ ತಣ್ಣನೆ ಗಾಳಿ, ತಂಪಾದ ನೆಲದ ಸ್ಪರ್ಶ, ಹಕ್ಕಿಗಳ ಕಲರವ, ಆಕೆಯ ಹೃದಯದಲ್ಲಿ ಅರಿವಿಲ್ಲದ ಚೈತನ್ಯದ ನಗು ಚಿಮ್ಮುತ್ತಿತ್ತು.
ಅವನ
ಹೆಸರು ಆಕಾಶ. ಮೊದಲ ಭೇಟಿಯೇ ಮಾತಿಲ್ಲದ
ಮೌನ ರಾಗ, ಆದರೆ ಆ
ಮುಗ್ಧ ಕ್ಷಣವೂ ಅವಳ ಹೃದಯವನ್ನು ಮೌನದಲ್ಲೇ
ಮಲಗಿದ್ದ ಪ್ರೀತಿಯ ತಟ್ಟಿ ಎಬ್ಬಿಸಿತ್ತು. ಪದಗಳಿಲ್ಲದ ಸಂವಹನದ ಮೂಲಕ, ಏನೋ ಹೊಸ ಕಲ್ಪನೆಯ
ಬೀಜ ಹೃದಯದಲ್ಲಿ ಬಿತ್ತಿತ್ತು.
ಹೃದಯದ
ಮಿಡಿತದ ಆ ಕ್ಷಣದಿಂದ ಅವಳು
ನಿರಂತರ ತನ್ನೊಳಗೆ ಪ್ರೇಮದ ನವ ಪಲ್ಲವಕ್ಕೆ ಪ್ರವೇಶಿಸುತ್ತಿದ್ದಳು.
ತೇಲುವಂತ ಅನುಭವ, ಅರಿವಿಗೆ ಮೀರಿದ ಮಾಂತ್ರಿಕತೆ, ಅವಳನ್ನು ಹೊಸತನದ ದಿಕ್ಕಿಗೆ ಸೆಳೆದಿತ್ತು.
ಕಾಲ
ಬದಲಾಯಿತು, ಆದರೆ ಆ ಪ್ರೀತಿಯ
ಭಾವನೆಗಳು ಅವಳ ಹೃದಯದಲ್ಲಿ ಹೆಮ್ಮರವಾಗಿತ್ತು.
ಒಂದು
ಸಂಜೆ - ಕಪ್ಪು-ಬಿಳುಪು ಬೆಳಕಿನ ಆಟ, ಸುತ್ತಲ ಹಸಿರು ಪ್ರಕೃತಿಯ
ಒಡನಾಟದಲ್ಲಿರುವಾಗ ಆಕಾಶ ಮತ್ತೆ ಎದುರಾದ.
ಅಕ್ಷರಗಳ ಅಗತ್ಯವಿಲ್ಲದ ನೋಟದಿಂದ ಅವಳು ಅವ್ಯಕ್ತವಾದ ಲೋಕಕ್ಕೆ
ಪಾದಾರ್ಪಣೆ ಮಾಡಿದಳು.
ಅವಳು
ಕಣ್ಣು ಮುಚ್ಚಿದಾಗ, ಪ್ರೀತಿಯ ಚುಂಬಕದ ಭಾವನೆಗಳು ಸುಂದರ ಲೋಕದಲ್ಲಿ ಅವಳು ಮುಳುಗೇಳುತ್ತಿದ್ದಳು. ನೆಲದಿಂದ ದೂರವಾಗಿ
ಆಗಸದಲ್ಲಿ ಮೋಡಗಳ ಒಡನಾಟದಲ್ಲಿ ಹಕ್ಕಿಯಂತೆ ಹಾರುತ್ತಿದ್ದಳು, ತೇಲುತ್ತಿದ್ದಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ