ರಘು ತನ್ನ ಜೀವನದ ಬಹುಪಾಲು ಇತರರಿಗಾಗಿ ಬದುಕಿದ್ದ. ನಿಸ್ವಾರ್ಥವಿಲ್ಲದ ಅವನ ಜೀವನ ಶೈಲಿಯಿಂದಾಗಿಯೇ ಅವನು ಕುಟುಂಬದವವರಿಂದ ಬೇರಾಗಬೇಕಾಯಿತು. "ಪರೋಪಕಾರಾರ್ಥಂ ಇದಂ ಶರೀರಂ" ಎಂಬ ಸೂಕ್ತಿಗೆ ತಕ್ಕ ಹಾಗೇ ಅವನು ಬದುಕ್ಕಿದ್ದ. ತನ್ನವರೆನಿಸಕೊಂಡವರೆಲ್ಲಾ ಎಂದೋ ದೂರಾಗಿದ್ದರು. ಈಗ ಜೀವನದ ಸಂಧ್ಯಾಕಾಲದಲ್ಲಿ ಅವನು ಏಕಾಂಗಿ. ನಿವೃತ್ತಿಯ ನಂತರ, ಅವನು ತನ್ನ ಮನಸ್ಸಿನೊಳಗಿನ ಶಬ್ದಗಳೊಂದಿಗೆ ಮಾತ್ರ ಉಳಿದಿದ್ದ. ದಿನಗಳು ಯೋಚನೆಗಳ ಪ್ರವಾಹದಲ್ಲಿ ಅವನ ಜೀವನದ ಸಂಧ್ಯಾ ಸಮಯ ಕಳೆಯುತಿದೆ. ನಾಲ್ಕು ಗೋಡೆಗಳ ಮಧ್ಯ ಇದ್ದರೆ ಸಮಯಕ್ಕೆ ದೀರ್ಘ ಆಯಸ್ಸಂತೆ, ಹೊರ ಪ್ರಪಂಚಕ್ಕೆ ಮನಸ್ಸು ತೆರೆದುಕೊಂಡರೆ ನಮಗೆ ದೀರ್ಘ ಆಯಸ್ಸಂತೆ. ಅವನು ತನ್ನ ಹಳೆಯ ಡೈರಿಯನ್ನು ತೆಗೆದುಕೊಂಡು, ಹೊಸ ನಿರ್ಧಾರವೊಂದನ್ನು ಬರೆದನು:
"ನಾಳೆಯಿಂದ ಪ್ರತಿ ದಿನ ಒಂದು ಹೊಸ ಯೋಚನೆ—not from the past, but
for the future."
ಆ ನಿರ್ಧಾರದಿಂದ ಪ್ರೇರಿತನಾಗಿ, ರಘು ಪಕ್ಕದ ಮನೆಯ ಪುಟ್ಟ ಹುಡುಗಿ
"ಮಾಯಾ" ಜೊತೆ ಮಾತನಾಡಲು ಹೊರಟ. ಅವಳು ನಗುತ್ತಾ ಮಾತನಾಡಿದಳು, ಆತ್ಮೀಯವಾಗಿ ಕೇಳಿದಳು:
"ತಾತಾ, ನೀವು ನನ್ನ ಅಜ್ಜನಂತೆ ಕಾಣಿಸುತ್ತೀರಿ.
ಅವರು ಕೂಡ ನಿಮ್ಮಂತೆಯೇ ಹೀಗೆಯೇ ಏಕಾಂಗಿಯಾಗಿ ಬದುಕುತ್ತಿದ್ದವರು..."
" ಅಜ್ಜಾ? ನಾನಾ?" " ಎಂದು ಕೇಳಿದನು.
ಅವಳು ನಕ್ಕಳು ಹಾಗೂ ತಲೆಬಾಗಿದಳು, ಚಿಗರೆಯಂತೆ ಮನೆಯೊಳಗೆ ಓಡಿಹೋಗಿ ಹಳೆಯ ಫೋಟೋವೊಂದನ್ನು ಕ್ಷಣ ಮಾತ್ರದಲ್ಲೇ ತಂದಳು. ಒಂದು ಹಳೆಯ ಫೋಟೋ ತೋರಿಸಿದಳು.
ಅದರಲ್ಲಿದ್ದದ್ದು—ಅವನದೇ ಫೋಟೋ.
ಅವನ ಹೃದಯ
ಜೋರಾಗಿ ಬಡಿದಿತು, ಮಿಡಿಯಿತು.
ಅವನು ಅಜ್ಜನಾಗಿದ್ದನು. ಆದರೆ ಅವಳಿಗೆ ಗೊತ್ತಿರಲಿಲ್ಲ. ಅವನ ಹೆಂಡತಿ ಹಾಗೂ ಮಗಳು ತಪ್ಪು ತಿಳುವಳಿಕೆಯಿಂದ ಅವನಿಂದ ದೂರವಾಗಿದ್ದರು ಬಹಳ ವರ್ಷಗಳಿಂದ. ಸತ್ತ ಗತಕಾಲದ ಕಹಿ ಘಟನೆಗಳ ಮೆಲುಕು ಹಾಕಲು ಇಂದು ಸುಸಮಯವಲ್ಲ. ಆದದ್ದು ಆಗಿ ಹೋಯಿತು. ಅದನ್ನು ಸರಿ ಮಾಡಲಾಗುವುದಿಲ್ಲ. ವಿಧಿಯ ಆಟಕ್ಕೆ ನಾವೆಲ್ಲರೂ ತಲೆ ಬಾಗಲೇಬೇಕು.
ಅವನಿಗೆ ಗೊತ್ತೇ
ಇರಲಿಲ್ಲ, ಅವನಿಗೆ ಮೊಮ್ಮಗಳು ಇದ್ದಾಳೆ ಎಂದು.
ಅಂದು ಸಂಜೆ, ರಘು ತನ್ನ ಡೈರಿಯಲ್ಲಿ ಮತ್ತೊಂದು ಸಾಲು ಬರೆದನು:
"ಕಾಲ ಕಳೆದರೂ, ಸಂಬಂಧಗಳು ಮರೆಯುವುದಿಲ್ಲ.
ಕೆಲವೊಮ್ಮೆ, ಅವು ಮತ್ತೆ ಬಂದು ನಮ್ಮನ್ನು ಬದುಕಿಸಲು ಕಾರಣವಾಗುತ್ತವೆ."
" ಮಾಯಾ" ಅವನ ಪುಟ್ಟ ಪ್ರಪಂಚವಾದಳು. ಅವಳ ಮಾತು, ನಗು, ಕೋಪ, ಆಟ , ಪಾಠ ಎಲ್ಲವೂ ಸುಂದರ ಕಾವ್ಯವಾಗಿತ್ತು ಅವನಿಗೆ. ಅವನ ನಾಳೆಗಳು ಸದ್ದಿಲ್ಲದೇ ಸುಂದರವಾಗತೊಡಗಿತು "ಮಾಯಾ” ಳ ಸಂಗದಿಂದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ