ಅವಳ ಹೆಸರು ನಯನಾ. ಚಿಗರೆ ಕಂಗಳ ಬೆಡಗಿ. ಮಾತಿನ ಮಲ್ಲಿ.
ಒಂದು ಕಾಲದಲ್ಲಿ ನಗುವಿನ
ನದಿಯಂತೆ ಹರಿದಿದ್ದ ಅವಳ ದಿನಗಳು, ರಾತ್ರಿಯ ಕತ್ತಲಿನ ಮೌನದ ಮಳೆಯಂತೆ ರೋಧಿಸುತ್ತಿವೆ.
ಮುಖದಲ್ಲಿ ನಗುವಿಲ್ಲ. ನೆಟ್ಟ ದೃಷ್ಟಿ ಕದಲುತ್ತಿಲ್ಲ. ಅವಳು ತನ್ನ
ಕೊನೆಯ ಕಿಟಕಿಯಿಂದ ನೋಡುತ್ತಾ ಕುಳಿತ್ತಿದ್ದಾಳೆ - ಮಳೆ ಹನಿಗಳು ಗಾಜಿನ ಮೇಲೆ ಬೀಳುತ್ತಿದ್ದವು, ಆದರೆ
ಅವಳ ಕಣ್ಣೀರು ಬತ್ತಿದೆದೆಯ ತಂಪೆರೆಯುತ್ತಿತ್ತು. ಅವಳ ಹೃದಯದಲ್ಲಿ ಅವ್ಯಕ್ತವಾದ ನೋವಿತ್ತು. ಕಾರ್ಮೋಡದಂತೆ
ಮನವ ಆವರಿಸಿತ್ತು.
ತನ್ನವನೆಂದು ಕೊಂಡ "ದಿವಾಕರ" ನು ಸಂಪತ್ತಿನ ಲಾಲೆಸೆಗೆ
ಬಿದ್ದು, ಪ್ರೀತಿಯ ನಾಟಕ ಮಾಡಿ ಮೋಸ ಮಾಡಿ ಓಡಿ ಹೋದನು. ಅವಳೋ ಅವಳದಲ್ಲದ ತಪ್ಪಿಗೆ ಅವನನ್ನು ಕಳೆದುಕೊಂಡಳು—not to death, but to
distance.
ದಿವಾಕರನ ನೆನಪು, ಅವಳನ್ನು ದಿನವೂ ನೋಯಿಸುತ್ತಿತ್ತು. ಕಣ್ಣೀರಿನಲ್ಲಿ
ದಿನವೂ ತೊಳೆಯುವಂತೆ ಮಾಡುತ್ತಿತ್ತು.
ಅವನ ಮಾತು, ನಗು, ಹಠ—all of it kept returning
like waves hitting a silent shore.
ಎಷ್ಟು ದಿನ ನೋವಿನ ಕೂಪದಲ್ಲಿರಲು ಸಾಧ್ಯ. "ಬದಲಾವಣೆ
ಜಗದ ನಿಯಮ", ಪರಿವರ್ತನೆ ನಿರಂತರ.
ಒಂದು ದಿನ, ಮಳೆ ನಿಂತ ನಂತರ, ಅವಳು ತಾನು ಬರೆದ ಪದ್ಯವನ್ನು ಮತ್ತೆ ಓದಿದಳು. ಕಾಲ ಎಲ್ಲರನ್ನೂ ಬದಲಾಯಿಸುತ್ತದೆ, ಎಂತಹುದೇ ನೋವನ್ನು ಮರೆಸುತ್ತದೆ, ಅಳಿಸುತ್ತದೆ.
ಅದರ ಕೊನೆಯ ಸಾಲುಗಳು ಅವಳನ್ನು ತಟ್ಟಿದವು:
"ಮಳೆನಿಂತ ಮೇಲೆ ಮತ್ತೆ ಹರುಷದಿ ನಿಂತಿರುವೆ,
ಎದೆಯ ಗಟ್ಟಿ ಮಾಡಿ ನಾಳೆಗೆ ಭರವಸೆಯಾಗಿರುವೆ."
ಅವಳು ಎದ್ದು ನಿಂತಳು. ಕಿಟಕಿಯ ಹೊರಗಡೆ ಧೋ! ಎಂದು ಮಳೆ ಸುರಿಯುತ್ತಿತ್ತು. ಬಾಗಿಲು ತೆರೆದು ಮಳೆಯಲ್ಲಿ ನಿಂತಳು. ಹಳೆಯ ಕೊಳೆಯನ್ನೆಲ್ಲಾ ತೊಳೆದಳು- ಮನ ಹಗುರಾಯಿತು, ನವ ನವೀನ "ನಯನಾ" ಮರು ಹುಟ್ಟು ಪಡೆದಿದ್ದಳು.
ಅವಳು ತನ್ನ ಕವನಗಳನ್ನು ಒಂದು ಪುಸ್ತಕದ ರೂಪಕ್ಕೆ ತರುವ ನಿರ್ಧಾರ ತೆಗೆದುಕೊಂಡಳು.
ಅವಳ ನೋವು, ಅವಳ ಕಣ್ಣೀರು, ಅವಳ ಮೌನ—all of it became ink on
paper.
ಅವಳ ಮೊದಲ ಪುಸ್ತಕದ ಹೆಸರು: "ಎದೆಯೊಳಗಿನ ಮೌನ"
ಅದು ಅನೇಕ ಹೃದಯಗಳನ್ನು ತಲುಪಿತು. ಸಾಹಿತ್ಯ ಅವಳ ಪಾಲಿನ ಆರಾಧ್ಯ ದೈವವಾಯಿತು. ಸಾಹಿತ್ಯ ಸೇವೆಗೆ ಪ್ರಶಸ್ತಿಗಳು ಹುಡುಕಿಕೊಂಡು ಬಂದವು.
ಅವಳು ಕಳೆದು ” ದಿವಾಕರ”ನೂ
ಓದಿದನು.
ಅವನು ಬರೆಯುತ್ತಿದ್ದ ಪತ್ರವೊಂದರಲ್ಲಿ ಬರೆದಿದ್ದನು:
"ನಿನ್ನ ಮೌನವೇ ನನ್ನ guilty conscience.
ನಿನ್ನ ಪದಗಳೇ ನನ್ನ ಪ್ರಾಯಶ್ಚಿತ್ತ."
ಅವರು ಮತ್ತೆ ಭೇಟಿಯಾದರು. ಅವಳಲ್ಲಿ ನೋವಿರಲಿಲ್ಲ, ಅವನಲ್ಲಿ ಪಾಪಪ್ರಜ್ಞೆ ಎದ್ದುಕಾಣುತ್ತಿತ್ತು.
ಈ ಬಾರಿ, ಮಾತುಗಳಿಲ್ಲದ ಮೌನ
ನರ್ತನಗೈಯುತ್ತಿತ್ತು.
ಈ ಬಾರಿ, ಅವನಲ್ಲಿ ಪಾಪಪ್ರಜ್ಞೆ, ಅಸಹಾಯಕತೆ ಮೇಳೈಸುತ್ತಿತ್ತು- ಸೂರ್ಯಗ್ರಹಣ ಕಾಣಿಸುತ್ತಿತ್ತು.
ಈ ಬಾರಿ, ಅವಳ ಕಣ್ಣೀರು ನೋವಿನಲ್ಲಲ್ಲ—ಸಂತೋಷದಲ್ಲಿ, ಸಾಧನೆಯ ಸಾರ್ಥಕತೆಯಲ್ಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ