ಗುರುವಾರ, ಆಗಸ್ಟ್ 14, 2025

ಉಸಿರು ನಿಲ್ಲುವ ಮುನ್ನ

ಅನನ್ಯಾಒಂದು ಕಾಲದಲ್ಲಿ ಕನಸುಗಳ ಹುಡುಗಿ, ಸದಾ ಕ್ರಿಯಾಶೀಲೆಯಾಗಿದ್ದವಳು. ಮುಖದಲ್ಲಿ ಸದಾ ನಗುವನ್ನೇ ಸೂಸುತ್ತಿದ್ದವಳು. ಆದರೆ ಅದೇನಾಯಿತೋ ಏನೋ? ನಗು ಮಾಸಿತ್ತು, ಲವಲವಿಕೆ ಕಳೆಗುಂದಿತ್ತು. ಬದಲಾವಣೆಗೆ ಕಾರಣ ಬಲ್ಲವರಾರೂ ಇಲ್ಲ. “ಅವಳೇ ಬಾಯಿ ಬಿಟ್ಟು ಹೇಳುವವರೆಗೂ. ಅವಳ ಮನದ ನೋವಿಗೆ ಔಷಧ ನೀಡುವವರಾರು?.”  ಅಂದಿನಿಂದ ಅವಳು ಜೀವನದ ಹೊಡೆತಗಳಿಗೆ ಬಲಿಪಶುವಾಗುತ್ತಿದ್ದಳುದಿನಗಳು ನಿರರ್ಥಕವಾಗಿ ಕಳೆಯುತ್ತಿದವು. ಮನಸ್ಸು ಮುದುಡಿದಾಗ ಅವಳು ಮೌನವಾಗುತ್ತಿದ್ದಳು, ವ್ಯಗ್ರತೆಯಲ್ಲಿ ನಗು ಮರೆಯುತ್ತಿದ್ದಳು. ಕಳೆಗುಂದಿದ ಚಂದ್ರನಂತೆ ಮೌನಕ್ಕೆ ಜಾರುತ್ತಿದ್ದಳು. ಹುಣ್ಣಿಮೆಯ ಹೊಂಬೆಳಕಲ್ಲೂ.

ಪ್ರತಿಯೊಂದಕ್ಕೂ ಒಂದು ಆರಂಭ ಅಥವಾ ಕೊನೆ ಇದ್ದೇ ಇರುತ್ತದೆ. ನಮ್ಮ ಈ ಜೀವನ                                 ಆಧ್ಯಂತರಹಿತವಾದುದಲ್ಲ, ಒಂದು ಮುಂಜಾನೆ, ಅವಳ ಮೊಬೈಲ್ನಲ್ಲಿ ಒಂದು ಸಂದೇಶ ಬಂತು:

" ಸತ್ತ ಮೇಲೆ ಮಲಗುವುದು ಇದ್ದೇ ಇದೆ. ಬದುಕಿದ್ದಾಗ ಏನಾದರೂ ಸಾಧಿಸುಉಸಿರು ನಿಲ್ಲುವ ಮುನ್ನ!"

ಆ ಸಾಲು ಅವಳಿಗೆ ತನ್ನೊಳಗೆ ತಾನೇ ಅವಲೋಕಿಸುವಂತೆ ಪ್ರೇರೇಪಿಸಿತು. ಒಂದಲ್ಲ, ಎರಡಲ್ಲ ಮೂರು ದಿನಗಳು ಅವಳು ಧ್ಯಾನಸ್ಥಳಂತೆ ಮೌನಕ್ಕೆ ಜಾರಿದಳು.  ಆ ಸಾಲು ಏನೋ ಅವಳಲ್ಲಿ ಮಾಂತ್ರಿಕ ಬದಲಾವಣೆ ತಂದಿತು.  

ಅವಳು ತನ್ನ ಇಷ್ಟದ ಸಂಗೀತವನ್ನು ಕೇಳಿದಳು. ಮನದಲ್ಲೇ ದೃಢನಿರ್ಧಾರ ಮಾಡಿದಳು.

ಅವಳು ನಕ್ಕಳು - ಅವಳದೇ ಮೂರ್ಖತನಕ್ಕೆ. ಅವಳ ಮುಖದಲ್ಲಿ ನಗು ಮೂಡಿತುಹೊಸ ಮನ್ವಂತರಕ್ಕೆ ತೆರೆದುಕೊಂಡಳು.

ಅವಳು ಹೊರಗೆ ಅಡಿಯಿಟ್ಟಳು ಹೊಸ ಹುರುಪಿನಿಂದ, ಮನೆಯ ಕೈತೋಟದ ಮಲ್ಲಿಗೆ ಹೂ ಸುಗಂಧವ ಸೂಸಿತ್ತು, ಸಾಧಿಸುವ ಪಥದತ್ತಮಾಮರದ ಕೋಗಿಲೆ ಹಾಡುತ್ತಿತ್ತು.

ಅವಳು ಪೇಂಟಿಂಗ್ ಬ್ರಷ್ ತೆಗೆದುಕೊಂಡಳು, ಬಣ್ಣಗಳೊಂದಿಗೆ ಮತ್ತೆ ಬದುಕನ್ನು ಚಿತ್ರಿಸಲು ಆರಂಭಿಸಿದಳು.ಅವಳು ಕಲಿಯಲು ಹೊಸ ಗುರುವ ಹುಡುಕಿದಳುಒಬ್ಬ ಹಿರಿಯ ಕಲಾವಿದ, ಅವಳಿಗೆ ಕಲೆ ಮಾತ್ರವಲ್ಲ, ಧೈರ್ಯವನ್ನೂ ತುಂಬಿದ.

ಅವಳು ಹೊಸ ಸ್ನೇಹಿತರನ್ನು ಕಂಡು ಕೊಂಡಳು, ನಾಳೆಗಳ ಹೊಸ ಕನಸುಗಳನ್ನು ಕಟ್ಟಿದಳು.

ಅವಳ ಚಿತ್ರಗಳು ಸ್ಥಳೀಯ ಪ್ರದರ್ಶನಗಳಲ್ಲಿ ಮೆರೆದವು. ಅವಳ ಕಲಾಕೃತಿಗಳಿಗೆ ದೇಶ, ವಿದೇಶಗಳಲ್ಲಿ ಬೇಡಿಕೆ ಹೆಚ್ಚಾದವು. ಒಂದು ದಿನ, ಅವಳ ಚಿತ್ರವೊಂದನ್ನು ಖರೀದಿಸಲು ಬಂದ ವ್ಯಕ್ತಿ, ಅವಳಿಗೆ ಒಂದು ಅವಕಾಶ ನೀಡಿದ: "ನೀವು ನಮ್ಮ ಸಂಸ್ಥೆಯ ಕಲಾ ನಿರ್ದೇಶಕಿ ಆಗುವಿರಾ? "

ಅನನ್ಯಾ ನಕ್ಕಳು ಬಾರಿ ನಿಜವಾದ ಸಂತೋಷದಿಂದ. ಅವಳು ಒಪ್ಪಿದಳು.

ಅವಳ ಬದುಕು ಮತ್ತೆ ವರ್ಣರಂಜಿತಗೊಂಡಿತು ಬಾರಿ ತನ್ನದೇ ಆದ ಬಣ್ಣಗಳಲ್ಲಿ.

ಅಂತ್ಯವಲ್ಲ, ಇದು ಪ್ರಾರಂಭ.

ಬದುಕು ಬದಲಾಯಿಸಬಹುದು,

ಒಂದು ಸಾಲು, ಒಂದು ನಗು, ಒಂದು ನಿರ್ಧಾರ ಸಾಕು.

ಉಸಿರು ನಿಲ್ಲುವ ಮುನ್ನ, ಬದುಕು ನಗುತಿರಲಿ.

 

ಯಾರದೋ ಮಾತಿಗೆ ನಮ್ಮ ನಾಳೆಗಳ ಬಲಿಕೊಡದಿರೋಣ. ನಮ್ಮ ಮನದ ಮಾತಿಗೆ ಕಿವಿಗೊಡೋಣ, ಧನ್ಯತೆಯಲಿ ಮೀಯೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ